Kannada Updates Kannada Updates

Sunday, August 30, 2020

ನಾನು ಡ್ರಗ್ಸ್‌ ಸೇವಿಸಲ್ಲ ಎಂದು ಆರೋಪ ತಳ್ಳಿ ಹಾಕಿದ ಖ್ಯಾತ ಗಾಯಕ.


ಬೆಂಗಳೂರು (ಆ.30):  ‘ಖ್ಯಾತ ಗಾಯಕ ರಘು ದೀಕ್ಷಿತ್‌ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ’ ಎಂದು ಚಿತ್ರೋದ್ಯಮಿ ಪ್ರಶಾಂತ್‌ ಸಂಬರಗಿ ಗಂಭೀರವಾಗಿ ಆರೋಪ ಮಾಡಿದ್ದು, ಇದನ್ನು ರಘು ದೀಕ್ಷಿತ್‌ ಬಲವಾಗಿ ತಳ್ಳಿ ಹಾಕಿದ್ದಾರೆ.ನಾನು ಏನು, ನನ್ನ ವ್ಯಕ್ತಿತ್ವ ಎಂಥದ್ದು ಎಂಬುದು ನನ್ನ ಸ್ನೇಹಿತರು ಮತ್ತು ಹತ್ತಿರದವರಿಗೆ ಗೊತ್ತಿದೆ. ಆದರೆ ಆಧಾರ ರಹಿತವಾಗಿ ನನ್ನ ಹೆಸರು ಈ ಪ್ರಕರಣದಲ್ಲಿ ತೆಗೆದಿದ್ದು ಯಾಕೆ? ಯಾರ ಒತ್ತಡ ಮತ್ತು ಯಾವ ಕಾರಣಕ್ಕೆ ನನ್ನ ಹೆಸರು ಹೇಳಿದ್ದಾರೆ ಎಂಬುದನ್ನು ಪ್ರಶಾಂತ್‌ ಅವರೇ ಸ್ಪಷ್ಟನೆ ನೀಡಬೇಕು. ಅದೊಂದೇ ನನ್ನ ಬೇಡಿಕೆ. ಯಾಕೆಂದರೆ ಆರೋಪ ಮಾಡಿದವರೇ ವಿವರಣೆ ನೀಡುವ ಮೂಲಕ ವಾಸ್ತವ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
Read More

Thursday, August 20, 2020

ಮುಸ್ಲಿಂ ದಂಪತಿ ತಮ್ಮ ಮಗುವಿಗೆ ಗಣೇಶ್ ಎಂದು ಹೆಸರಿಟ್ಟದ್ದು ಯಾಕೆ ಗೊತ್ತೇ?

27 ವರ್ಷ ವಯಸ್ಸಿನ ಇಲ್ಯಾಝ್ ಶೇಖ್ ತನ್ನ ಗರ್ಭಿಣಿ ಹೆಂಡತಿಯನ್ನು ಮುಂಬೈಯ ಟ್ಯಾಕ್ಸಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.


ಆದರೆ ನೂರ್ ಜಹಾನ್ ಮತ್ತು ಇಲ್ಯಾಸ್ ದಂಪತಿಗೆ ಆಘಾತವಾಗಿತ್ತು. ಯಾಕೆಂದರೆ ನೋವು ಉಲ್ಬಣಿಸಿತ್ತು. ಕ್ಯಾಬ್ ಡ್ರೈವರ್ ತನ್ನ ಕಾರಿನಲ್ಲಿ ಮಗುವನ್ನು ಹೆರಿಗೆ ಮಾಡಲು ಅವಕಾಶ ಕೊಡುವುದಿಲ್ಲ ಎಂದರು. ಕಾರನ್ನು ಬಿಟ್ಟು ಅವರು ಹೊರಗೆ ನಡೆದರು.

ದೂರದಲ್ಲಿ ಗಣೇಶ ದೇವಸ್ಥಾನವನ್ನು ಅವರು ಕಂಡರು. ದಂಪತಿಗಳು ಅದರ ಕಡೆಗೆ ನಡೆದರು. ದೇವಾಲಯದಲ್ಲಿ ತಾತ್ಕಾಲಿಕ ಹೆರಿಗೆ ಕೊಠಡಿಯನ್ನು ಅಲ್ಲಿನ ಮಹಿಳೆಯರು ನಿರ್ಮಿಸಲು ಸಹಾಯ ಮಾಡಿದರು. ಗಂಡು ಮಗುವಿನ ಹೆರಿಗೆ ಯಶಸ್ವಿಯಾಗಿ ನಡೆಯಿತು.

ಇದೊಂದು ಮಹತ್ವಪೂರ್ಣವಾದ ದಿನವಾಗಿತ್ತು ಆ ಮುಸ್ಲಿಂ ದಂಪತಿಗಳಿಗೆ. ಈ ದಿನವನ್ನು ಸ್ಮರಿಸಿಕೊಳ್ಳಲು ನೂರ್ ಜಹಾನ್ ಅವರ ಪುತ್ರನಿಗೆ ಗಣೇಶ್ ಎಂದು ಹೆಸರಿಟ್ಟರು.
Read More

Sunday, August 16, 2020

ದೇಹದಲ್ಲಿರುವ ಗಾಯದ ಕಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.


ಬೆಂಗಳೂರು : ಗಾಯ, ಬರ್ನ್ , ಶಸ್ತ್ರಚಿಕಿತ್ಸೆ ಆದ ಸ್ಥಳಗಳಲ್ಲಿ ಕಲೆಗಳು ಹಾಗೇ ಉಳಿದುಕೊಂಡಿರುತ್ತದೆ. ಈ ಕಲೆಗಳನ್ನು ನಿವಾರಣೆಯಾಗಿ ಅಲ್ಲಿ ಹೊಸ ಸ್ಕೀನ್ ಬೆಳೆಯಲು ಈ ಮನೆಮದ್ದನ್ನು ಬಳಸಿ.


ಬೆಳ್ಳುಳ್ಳಿ ಕೆಲವು ಕಿಣ್ವಗಳು ಚರ್ಮಕ್ಕೆ ಪ್ರವೇಶಿಸುವುದನ್ನು ತಡೆದು ಅಂಗಾಂಶ ಮತ್ತು ವರ್ಣ ದ್ರವ್ಯದ ರಚನೆಗೆ ಕಾರಣವಾಗಹುದು. ಆದಕಾರಣ ಬೆಳ್ಳುಳ್ಳಿಗೆ ಲವಂಗ ಸೇರಿಸಿ ಪುಡಿ ಮಾಡಿ ಕಲೆಯಿರುವ ಜಾಗಕ್ಕೆ ಹಚ್ಚಿ  15 ನಿಮಿಷ ಬಿಟ್ಟು ವಾಶ್ ಮಾಡಿ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ಗಾಯದ ಕಲೆ ಬೇಗ ನಿವಾರಣೆಯಾಗುತ್ತದೆ.
Read More

Friday, August 14, 2020

ನಾಸಾ ಮಂಗಳನ ಅದ್ಭುತ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮಾರ್ಸ್ ರೆಕಾನೈಸನ್ಸ್ ಆರ್ಬಿಟರ್ ರೆಡ್ ಪ್ಲಾನೆಟ್ನ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದೆ; ಇಲ್ಲಿ ಅವುಗಳನ್ನು ಹತ್ತಿರದಿಂದ ನೋಡೋಣ.


ಕೆಟ್ಟ ದಿನಾಂಕ, ಹೈರೈಸ್ ಕ್ಯಾಮೆರಾ 194 ಟೆರಾಬೈಟ್ ಡೇಟಾವನ್ನು ಭರ್ತಿ ಮಾಡುವ 68,82,204 ಚಿತ್ರಗಳನ್ನು ತೆಗೆದುಕೊಂಡಿದೆ. (ಚಿತ್ರ: ನಾಸಾ)

Read More

Thursday, August 13, 2020

ರಸ್ತೆ ಬದಿಯೇ ವೃದ್ಧನ ಶವ ಇಳಿಸಿ ಅಮಾನವೀಯತೆ ತೋರಿದ ಚಾಲಕ.

ವೃದ್ಧನ ಶವವನ್ನು ರಸ್ತೆಯಲ್ಲೆ ಆ್ಯಂಬುಲೆನ್ಸ್‌  ಚಾಲಕ ಬಿಟ್ಟು ಹೋಗಿ ಮಾನವೀಯತೆ ಮೆರೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ಹೊನ್ನಾಳಿ (ಆ.14): ಆಸ್ಪತ್ರೆ ದಾರಿಯಲ್ಲಿ ಮೃತಪಟ್ಟಅನಾರೋಗ್ಯಪೀಡಿತ ವೃದ್ಧರೊಬ್ಬರ ಶವವನ್ನು ಆ್ಯಂಬುಲೆನ್ಸ್‌ ಚಾಲಕ ರಸ್ತೆ ಬದಿಯಲ್ಲೇ ಇಳಿಸಿ ಹೋದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಿಂದ ವರದಿಯಾಗಿದೆ.

ಅಂಬ್ಯುಲೆನ್ಸ್‌ ಚಾಲಕನ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಳಿಜ್ವರದಿಂದ ಬಳಲುತ್ತಿದ್ದ ತಾಲೂಕಿನ ಅರಬಗಟ್ಟೆಗ್ರಾಮದ ನಿವಾಸಿ ದೊಡ್ಡಪ್ಪ (70) ಅವರನ್ನು ಮಂಗಳವಾರ ಹೊನ್ನಾಳಿ ಆಸ್ಪತ್ರೆಗೆ ಕುಟುಂಬದವರು ಚಿಕಿತ್ಸೆಗಾಗಿ ಕರೆ ತಂದಿದ್ದರು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಅಂಬ್ಯುಲೆನ್ಸ್‌ ಮೂಲಕ ಕಳುಸಿದ್ದಾರೆ. 

ಚಾಲಕ ಮಾರ್ಗ ಮಧ್ಯೆಯೇ ಬಿಟ್ಟು ಹೋದ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ವೃದ್ಧನ ಶವವನ್ನು ಇನ್ನೊಂದು 108 ಆ್ಯಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ಕಳುಹಿಸಿ ಕೊಟ್ಟರು. ಚಾಲಕನ ವಿರುದ್ಧ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾದನಬಾವಿ ಗ್ರಾಮದ ಸಮೀಪ ದೊಡ್ಡಪ್ಪ ಮೃತಪಟ್ಟಿದ್ದು, ವಾಹನ ಚಾಲಕ ಶವ ಹಾಗೂ ಜೊತೆಗಿದ್ದವರನ್ನು ಮುಖ್ಯ ರಸ್ತೆ ಪಕ್ಕದಲ್ಲೇ ಇಳಿಸಿ ಹೊರಟು ಹೋಗಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ವೃದ್ಧನ ಶವವನ್ನು ಇನ್ನೊಂದು 108 ಆ್ಯಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ಕಳುಹಿಸಿ ಕೊಟ್ಟರು. ಚಾಲಕನ ವಿರುದ್ಧ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿದೆ.Read More

Wednesday, August 12, 2020

ಡಿಜಿ ಹಳ್ಳಿ ಗಲಭೆ.


ಬೆಂಗಳೂರು (ಆ. 12):  

ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಉದ್ರಿಕ್ತ ಗುಂಪೊಂದು ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದೆ. 


 ವಿಡಿಯೋ ನೋಡಿ


Read More

Tuesday, August 11, 2020

ಬ್ರಹ್ಮಗಿರಿ ಬೆಟ್ಟ ಕುಸಿತ: 2 ಕಿ. ಮೀ ದೂರದಲ್ಲಿ ಅರ್ಚಕರ ಮೃತದೇಹ ಪತ್ತೆ.

ಅರ್ಚಕ ನಾರಾಯಣಾಚಾರ್‌ ಮೃತದೇಹ ಪತ್ತೆ| ಅರ್ಚಕರ ಮನೆಯಿದ್ದ ಸ್ಥಳದಿಂದ 2.5 ಕಿ.ಮೀ. ದೂರದಲ್ಲಿ ದೊರಕಿದ ಶವ| ಪತ್ನಿ ಸೇರಿ ಇನ್ನೂ ಮುವರಿಗಾಗಿ ಶೋಧ| ಮನೆಯಿದ್ದ ಸ್ಥಳದಲ್ಲೇ ಸಾಕುನಾಯಿ, 2 ಕಾರು, ಮತ್ತಿತರ ವಸ್ತುಗಳು ಪತ್ತೆ| ಡಸ್ಟರ್‌, ಓಮ್ನಿ ಕಾರು ಸಂಪೂರ್ಣ ಜಖಂ.


ಮಡಿಕೇರಿ(ಆ.12): ಕಾವೇರಿ ನದಿ ಉಗಮಸ್ಥಳ ಕೊಡಗಿನ ತಲಕಾವೇರಿ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಕಳೆದ ಬುಧವಾರ ರಾತ್ರಿ ಸಂಭವಿಸಿದ ಭೂಕುಸಿತದ ವೇಳೆ ಕಣ್ಮರೆಯಾಗಿದ್ದ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣಾಚಾರ್‌ ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಐದು ದಿನದ ಕಾರ್ಯಾಚರಣೆ ಬಳಿಕ ನಾರಾಯಣ ಆಚಾರ್‌ ಅವರ ಮನೆಯಿದ್ದ ಸ್ಥಳದಿಂದ ಎರಡೂವರೆ ಕಿ.ಮೀ. ದೂರದಲ್ಲಿ ನಾಗತೀರ್ಥ ಎಂಬ ಸ್ಥಳದಲ್ಲಿ ಅವರ ಮೃತದೇಹ ದೊರಕಿದ್ದು ಮಂಗಳವಾರವೇ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಬೆಟ್ಟದ ಮೇಲಿನಿಂದ ಭೂಕುಸಿತ ಉಂಟಾಗಿ ಮಳೆ ನೀರಿನ ರಭಸಕ್ಕೆ ನಾರಾಯಣಾಚಾರ್‌ ಅವರ ಮೃತದೇಹ ಪ್ರಪಾತಕ್ಕೆ ಉರುಳಿ ಮಣ್ಣಿನಲ್ಲಿ ಹೂತು ಹೋಗಿತ್ತು. ಹರಿಯುತ್ತಿರುವ ನೀರು, ಬಂಡೆಕಲ್ಲುಗಳ ಮೂಲಕ ಸಾಗಿದ ರಕ್ಷಣಾ ಪಡೆ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತದೇಹವನ್ನು ಪತ್ತೆಹಚ್ಚಿತು. ನಂತರ ಬೆಟ್ಟದ ಹಾದಿಯಲ್ಲೇ ಎರಡೂವರೆ ಕಿಮೀ ಏರಿ ಹಗ್ಗದ ಸಹಾಯದ ಮೂಲಕ ಶವವನ್ನು ಹರಸಾಹಸಪಟ್ಟು ಎತ್ತಿಕೊಂಡು ಬಂದರು.

ಕಣ್ಮರೆಯಾಗಿರುವ ಐವರಲ್ಲಿ ಈಗಾಗಲೇ ಆನಂದ ತೀರ್ಥ, ನಾರಾಯಣಾಚಾರ್‌ ಅವರ ಮೃತದೇಹ ಪತ್ತೆಯಾಗಿದೆ. ನಾರಾಯಣಾಚಾರ್‌ ಅವರ ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿ ಕಿರಣ್‌, ಶ್ರೀನಿವಾಸ್‌ ಪಡ್ಡಿಲಾಯ ಅವರ ಮೃತದೇಹಗಳು ಇನ್ನಷ್ಟೇ ಪತ್ತೆಯಾಗಬೇಕಿದೆ.

ಬೆಳ್ಳಂಬೆಳಗ್ಗೆ ಕಾರ್ಯಾಚರಣೆ: ಮಂಗಳವಾರ ಬೆಳಗ್ಗನಿಂದಲೇ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿ ಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು, ಹೋಂ ಗಾರ್ಡ್‌ಗಳು ಸೇರಿ ಸುಮಾರು ನೂರಕ್ಕೂ ಅಧಿಕ ಮಂದಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ನಾರಾಯಣಾಚಾರ್‌ ಅವರ ಮನೆಯಿದ್ದ ಸ್ಥಳದಲ್ಲಿ ಮೊದಲು ಅವರ ಸಾಕುನಾಯಿಯ ಕಳೇಬರ ಪತ್ತೆಯಾಯಿತು. ಬಳಿಕ ನಾರಾಯಣ ಆಚಾರ್‌ ಬಳಸುತ್ತಿದ್ದ ರೆನಾಲ್ಟ್‌ ಡಸ್ಟರ್‌ ಹಾಗೂ ಓಮ್ನಿ ಕಾರುಗಳು ಸಂಪೂರ್ಣ ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾದವು. ಜೊತೆಗೆ ಅರ್ಚಕರಿಗೆ ಸೇರಿದ ಹಲವು ವಸ್ತುಗಳು ಪತ್ತೆಯಾದವು.

ಸೋಮಣ್ಣ ಪರಿಶೀಲನೆ


ತಲಕಾವೇರಿಯಲ್ಲಿ ಗಜಗಿರಿ ಬೆಟ್ಟಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಖುದ್ದು ಭೇಟಿ ನೀಡಿ ಶೋಧ ಕಾರ್ಯಾಚರಣೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಹಲವು ಸಲಹೆ, ಮಾರ್ಗದರ್ಶನ ನೀಡಿದರಲ್ಲದೆ, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ರಕ್ಷಣಾ ತಂಡಗಳಿಗೆ ಊಟ ಬಡಿಸುವ ಮೂಲಕ ಪ್ರೋತ್ಸಾಹ ತುಂಬಿದರು. ಹಾಗೆಯೇ ಸಚಿವರು ಸಹ ಕಾರ್ಯಾಚರಣೆ ತಂಡದೊಂದಿಗೆ ಊಟ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಸಚಿವರು ನಾರಾಯಣ ಆಚಾರ್‌ ಅವರ ಮಕ್ಕಳ ಜೊತೆ ಚರ್ಚಿಸಿದರು. ಸಂಸದ ಪ್ರತಾಪ್‌ ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಇದ್ದರು.

ನಾರಾಯಣ ಆಚಾರ್‌ ಆಸ್ತಿ ಬಗ್ಗೆ ತರಾವರಿಯ ಚರ್ಚೆ - ಕುತೂಹಲ ಕೆರಳಿಸಿದ ಸ್ಥಳೀಯ ವದಂತಿ


ಅರ್ಚಕ ನಾರಾಯಣ ಆಚಾರ್‌ ಅವರ ಆಸ್ತಿ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿದೆ. ಬ್ರಹ್ಮಗಿರಿ ಬೆಟ್ಟದಲ್ಲಿರುವ ತಲಕಾವೇರಿ ದೇವಾಲಯದಲ್ಲಿ ಸುಮಾರು 12 ತಲೆಮಾರಿನಿಂದ ಆಚಾರ್‌ ಕುಟುಂಬ ಪೂಜೆಯ ಉಸ್ತುವಾರಿ ವಹಿಸಿಕೊಂಡು ಬರುತ್ತಿದೆ. ಅವರಿಗೆ ಏಲಕ್ಕಿ, ಕಾಫಿ ಹಾಗೂ ಕಾಳುಮೆಣಸು ಸೇರಿ 100 ಎಕರೆ ತೋಟವಿದೆ. ಅದರಲ್ಲಿ ಬೆಳೆದ 10 ಕ್ವಿಂಟಲ್‌ ಕರಿಮೆಣಸು, 5 ಕ್ವಿಂಟಲ್‌ ಏಲಕ್ಕಿ ಫಸಲನ್ನು 3 ವರ್ಷದಿಂದ ಮಾರಾಟ ಮಾಡದೆ ಮನೆಯಲ್ಲೇ ಇಟ್ಟುಕೊಂಡಿದ್ದರು. ಜೊತೆಗೆ ಸಾಕಷ್ಟುಚಿನ್ನಾಭರಣಗಳೂ ಇದ್ದಿದ್ದರಿಂದ ಅವರು ಮನೆ ಬಿಟ್ಟು ತೆರಳಲು ನಿರಾಕರಿಸಿದ್ದರು ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಇನ್ನೊಂದೆಡೆ ಮೂಲತಃ ಕೃಷಿಕ ಕುಟುಂಬದವರಾಗಿರುವ ಅವರು ಅರ್ಚಕ ವೃತ್ತಿಯನ್ನೂ ಮುಂದುವರಿಸಿಕೊಂಡು ಬಂದಿದ್ದರು. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಅವರ ಬಳಿ ಆಸ್ತಿ ಇದ್ದಿರಬಹುದು ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಆಚಾರ್‌ ಕುಟುಂಬಸ್ಥರಾಗಲಿ, ಮಕ್ಕಳಾಗಲಿ, ಆಪ್ತರಾಗಲಿ ಯಾರೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

Read More