ನಾನು ಡ್ರಗ್ಸ್‌ ಸೇವಿಸಲ್ಲ ಎಂದು ಆರೋಪ ತಳ್ಳಿ ಹಾಕಿದ ಖ್ಯಾತ ಗಾಯಕ. - Kannada Updates ನಾನು ಡ್ರಗ್ಸ್‌ ಸೇವಿಸಲ್ಲ ಎಂದು ಆರೋಪ ತಳ್ಳಿ ಹಾಕಿದ ಖ್ಯಾತ ಗಾಯಕ. ~ Kannada Updates

Sunday, August 30, 2020

ನಾನು ಡ್ರಗ್ಸ್‌ ಸೇವಿಸಲ್ಲ ಎಂದು ಆರೋಪ ತಳ್ಳಿ ಹಾಕಿದ ಖ್ಯಾತ ಗಾಯಕ.


ಬೆಂಗಳೂರು (ಆ.30):  ‘ಖ್ಯಾತ ಗಾಯಕ ರಘು ದೀಕ್ಷಿತ್‌ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ’ ಎಂದು ಚಿತ್ರೋದ್ಯಮಿ ಪ್ರಶಾಂತ್‌ ಸಂಬರಗಿ ಗಂಭೀರವಾಗಿ ಆರೋಪ ಮಾಡಿದ್ದು, ಇದನ್ನು ರಘು ದೀಕ್ಷಿತ್‌ ಬಲವಾಗಿ ತಳ್ಳಿ ಹಾಕಿದ್ದಾರೆ.ನಾನು ಏನು, ನನ್ನ ವ್ಯಕ್ತಿತ್ವ ಎಂಥದ್ದು ಎಂಬುದು ನನ್ನ ಸ್ನೇಹಿತರು ಮತ್ತು ಹತ್ತಿರದವರಿಗೆ ಗೊತ್ತಿದೆ. ಆದರೆ ಆಧಾರ ರಹಿತವಾಗಿ ನನ್ನ ಹೆಸರು ಈ ಪ್ರಕರಣದಲ್ಲಿ ತೆಗೆದಿದ್ದು ಯಾಕೆ? ಯಾರ ಒತ್ತಡ ಮತ್ತು ಯಾವ ಕಾರಣಕ್ಕೆ ನನ್ನ ಹೆಸರು ಹೇಳಿದ್ದಾರೆ ಎಂಬುದನ್ನು ಪ್ರಶಾಂತ್‌ ಅವರೇ ಸ್ಪಷ್ಟನೆ ನೀಡಬೇಕು. ಅದೊಂದೇ ನನ್ನ ಬೇಡಿಕೆ. ಯಾಕೆಂದರೆ ಆರೋಪ ಮಾಡಿದವರೇ ವಿವರಣೆ ನೀಡುವ ಮೂಲಕ ವಾಸ್ತವ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

0 comments:

Post a Comment